ನೈಸರ್ಗಿಕ ಗರ್ಭಧಾರಣೆ
ಸಾಮಾನ್ಯವಾಗಿ ಗರ್ಭಾವಸ್ಥೆಯು ಲೈಂಗಿಕ ಸಂಭೋಗದಿಂದ ಸಂಭವಿಸುತ್ತದೆ, ಇದರಲ್ಲಿ ಪುರುಷನ ವೀರ್ಯವು ಮಹಿಳೆಯ ಯೋನಿಯೊಳಗೆ ಸ್ಖಲನಗೊಳ್ಳುತ್ತದೆ, ಅದು ಮುಂದೆ ಸಾಗಿ ಮತ್ತು ಅವಳ ಅಂಡಾಣುವನ್ನು ಫಲವತ್ತಾಗಿಸಿ(ಫರ್ಟಿಲೈಸ್) ಗರ್ಭಾಶಯದಲ್ಲಿ ಅಳವಡಿಸಿಕೊಳ್ಳುವ ಭ್ರೂಣವನ್ನು ರೂಪಿಸುತ್ತದೆ.
ಮಹಿಳೆಯು ಆರೋಗ್ಯವಂತಳಾಗಿದ್ದರೆ ಮತ್ತು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಒಂದೇ ಋತುಆವರ್ತನದ ಅವಧಿಯಲ್ಲಿ ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ, ಅಂದರೆ 100 ರಲ್ಲಿ 25 ಮಹಿಳೆಯರು ಯಶಸ್ವಿಯಾಗುತ್ತಾರೆ ಎಂದು ನಾವು ಹೇಳಬಹುದು. ತಿಂಗಳು. ಆದ್ದರಿಂದ, 40 ರ ಹೊತ್ತಿಗೆ, ಸರಾಸರಿ ಆರೋಗ್ಯವಂತ ಮಹಿಳೆಯರು ಗರ್ಭಿಣಿಯಾಗಲು ಕೇವಲ ಶೇ. 5ರಷ್ಟು ಅವಕಾಶವನ್ನು ಹೊಂದಿರುತ್ತಾರೆ.
ಗರ್ಭಧರಿಸುವಲ್ಲಿ ವಯಸ್ಸು ಪ್ರಮುಖ ಪಾತ್ರ ವಹಿಸುತ್ತದೆ.
35 ರ ನಂತರ ಮಹಿಳೆಯರು ನೈಸರ್ಗಿಕವಾಗಿ ಗರ್ಭಿಣಿಯಾಗಲು ಕಷ್ಟವಾಗುತ್ತದೆ. 30 ನೇ ವಯಸ್ಸಿನಲ್ಲಿ ಫರ್ಟಿಲಿಟಿ ಮಟ್ಟ ಕ್ಷೀಣಿಸಲು ಪ್ರಾರಂಭಿಸುತ್ತದೆ ಮತ್ತು ನಿಮ್ಮ ಋತುಬಂಧ(ಮೆನೋಪಾಸ್)ದವರೆಗೆ ಕ್ರಮೇಣ ಇಳಿಕೆ ಕಾಣುತ್ತದೆ. ನೀವು 35 ಅಥವಾ ನಂತರ ಮಗುವನ್ನು ಮಾಡಲು ಆಶಿಸುತ್ತಿದ್ದರೆ, ಆ ಹಂತವನ್ನು ವೈದ್ಯಕೀಯ ಭಾಗಿಯಲ್ಲಿ ‘ಹೆಚ್ಚಾದ ತಾಯಿಯ ವಯಸ್ಸು' ಎಂದು ಕರೆಯಲಾಗುತ್ತದೆ.
ನಿಮ್ಮೊಂದಿಗೆ, ನಿಮ್ಮ ಅಂಡಾಣುಗಳಿಗೆ ವಯಸ್ಸಾಗುತ್ತವೆ ಮತ್ತು ನೀವು ಋತುಬಂಧವನ್ನು ಮುಟ್ಟಿದ ನಂತರ ಇವು ಕ್ಷೀಣಿಸಲು ಪ್ರಾರಂಭಿಸುತ್ತವೆ. ಅಂದರೆ ನಿಮ್ಮ ಪ್ರೌಢಾವಸ್ಥೆಯಲ್ಲಿ ನೀವು ಕೇವಲ 300,000 ಅಂಡಾಣುಗಳನ್ನು ಉತ್ಪಾದಿಸಿರಬಹುದು. ಅಲ್ಲದೇ 37 ರ ಹೊತ್ತಿಗೆ ನೀವು ಕೇವಲ 25,000 ಅಂಡಾಣುಗಳಿಗೆ ಇಳಿದಿದ್ದೀರಿ. ಆದ್ದರಿಂದ, ನಿಮ್ಮ ಅಂಡಾಶಯದಲ್ಲಿ ಕಡಿಮೆ ಅಂಡಾಣುಗಳು, ನೈಸರ್ಗಿಕ ಗರ್ಭಧಾರಣೆಯ ಸಾಧ್ಯತೆಗಳು ಕಡಿಮೆ. ಮತ್ತು ಆಕಸ್ಮಿಕವಾಗಿ, ನೀವು ಗರ್ಭಿಣಿಯಾಗಿದ್ದರೂ ಕೂಡ, ಹಳೆಯ ಅಂಡಾಣುಗಳು ಅಸಹಜ ವರ್ಣತಂತುಗಳನ್ನು ಸಾಗಿಸುವ ಸಾಧ್ಯತೆ ಹೆಚ್ಚು, ಇದು ಗರ್ಭಪಾತಕ್ಕೆ ಕಾರಣವಾಗಬಹುದು ಅಥವಾ ಮಗು ಅಸ್ವಸ್ಥತೆಗಳೊಂದಿಗೆ ಜನಿಸುವುದಕ್ಕೆ ಕಾರಣವಾಗಬಹುದು. ಇದಲ್ಲದೆ, 35 ರ ನಂತರದ ಮಹಿಳೆಯರಿಗೆ ಗರ್ಭಾಶಯದ ಫೈಬ್ರಾಯ್ಡ್‍ಗಳು, ಎಂಡೊಮೆಟ್ರಿಯೊಸಿಸ್‍ನಂತಹ ಸಮಸ್ಯೆಗಳಿರಬಹುದು ಎಂದು ಊಹಿಸಲಾಗಿದೆ, ಇದರಿಂದ ಗರ್ಭಧರಿಸಲು ಕಷ್ಟವಾಗುತ್ತದೆ.
ಆದರೂ, ನಿಮ್ಮ ಫರ್ಟಿಲಿಟಿಯನ್ನು ಹೆಚ್ಚಿಸುವ ಕೆಲವು ಸಲಹೆಗಳಿವೆ.
ಫರ್ಟಿಲಿಟಿಯನ್ನು ಹೆಚ್ಚಿಸಲು ನೈಸರ್ಗಿಕ ಮಾರ್ಗಗಳು
ಇತ್ತೀಚಿನ ದಿನಗಳಲ್ಲಿ ದಂಪತಿಗಳಲ್ಲಿ ಫರ್ಟಿಲಿಟಿ ಸಾಮಾನ್ಯ ಸಮಸ್ಯೆಯಾಗಿದೆ. ಪೋಷಕರಾಗುವ ಹಾದಿಯು ಕೆಲವೊಮ್ಮೆ ಮತ್ತು ಅನೇಕ ಬಾರಿ ದೊಡ್ಡ ಸವಾಲನ್ನು ಒಡ್ಡಬಹುದು. ಆದರೆ ಆ ಸವಾಲುಗಳನ್ನು ಎದುರಿಸುವಲ್ಲಿ ನೀವು ಒಬ್ಬಂಟಿಯಾಗಿಲ್ಲ.
ಅದೃಷ್ಟವಶಾತ್, ನಿಮ್ಮ ಫರ್ಟಿಲಿಟಿಯನ್ನು ಬಲಪಡಿಸಲು ಕೆಲವು ನೈಸರ್ಗಿಕ ಮಾರ್ಗಗಳಿವೆ, ಉದಾಹರಣೆಗೆ ಆಹಾರದ ಆದ್ಯತೆ ಮತ್ತು ನಿಮ್ಮ ಜೀವನಶೈಲಿಯಲ್ಲಿನ ಬದಲಾವಣೆಗಳು ನಿಮ್ಮ ಫರ್ಟಿಲಿಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನಿಮ್ಮ ಫರ್ಟಿಲಿಟಿಯನ್ನು ಹೆಚ್ಚಿಸಲು ಮತ್ತು ವೇಗವಾಗಿ ಗರ್ಭಿಣಿಯಾಗಲು ನೀವು ಅನುಸರಿಸಲು ಬಯಸುವ ಕೆಲವು ಸಲಹೆಗಳು ಇಲ್ಲಿವೆ.
• ಆ್ಯಂಟಿ ಆಕ್ಸಿಡೆಂಟ್(ಉತ್ಕರ್ಷಣ ನಿರೋಧಕ)ಗಳು
ಸಮೃದ್ಧವಾಗಿರುವ ಆಹಾರ: ಆ್ಯಂಟಿ ಆಕ್ಸಿಡೆಂಟ್‍ಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಆ್ಯಂಟಿ ಆಕ್ಸಿಡೆಂಟ್‍ಗಳು ಪುರುಷರು ಮತ್ತು ಮಹಿಳೆಯರಿಗೆ (ಫೆÇೀಲೇಟ್ ಮತ್ತು ಜಿಂಕ್) ಫರ್ಟಿಲಿಟಿಯನ್ನು ಸುಧಾರಿಸುತ್ತದೆ. ಇವು ನಿಮ್ಮ ದೇಹದಲ್ಲಿನ ಸ್ವತಂತ್ರ ರಾಡಿಕಲ್‍ಗಳನ್ನು ಸ್ಥಗಿತಗೊಳಿಸುತ್ತವೆ, ಇದು ವೀರ್ಯ ಮತ್ತು ಅಂಡಾಣುಗಳ ಕೋಶಗಳಿಗೆ ಹಾನಿ ಉಂಟುಮಾಡುತ್ತದೆ. ಆದ್ದರಿಂದ, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಮತ್ತು ಲುಟೀನ್‍ನಂತಹ ಪ್ರಯೋಜನಕಾರಿ ಆ್ಯಂಟಿ ಆಕ್ಸಿಡೆಂಟ್‍ಗಳಿಂದ ತುಂಬಿರುವ ಹಣ್ಣುಗಳು, ತರಕಾರಿಗಳು, ಬೀಜಗಳು ಮತ್ತು ಧಾನ್ಯಗಳನ್ನು ಹೆಚ್ಚು ಸೇವಿಸಿ
• ದೊಡ್ಡ ಪ್ರಮಾಣದ ಬೆಳಗಿನ ಉಪಹಾರ: ಗಮನಾರ್ಹ ಪ್ರಮಾಣದ ಬೆಳಗಿನ ಉಪಹಾರವನ್ನು ತಿನ್ನುವುದು ಫರ್ಟಿಲಿಟಿ ಸಮಸ್ಯೆಗಳಿರುವ ಮಹಿಳೆಯರಿಗೆ ನೆರವು ನೀಡಬಹುದು. ದೊಡ್ಡ ಪ್ರಮಾಣದ ಬೆಳಗಿನ ಉಪಹಾರವನ್ನು ತಿನ್ನುವುದರಿಂದ ಪಿಸಿಒಎಸ್‍ನ ಹಾರ್ಮೋನುಗಳ ಪರಿಣಾಮಗಳನ್ನು ಸುಧಾರಿಸಬಹುದು ಎಂದು ಅಧ್ಯಯನ ಕಂಡುಹಿಡಿದಿದೆ, ಇದು ಪಿಸಿಒಎಸ್ ಸಂತಾನೋತ್ಪತ್ತಿ ಸಮಸ್ಯೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕಡಿಮೆ ಉಪಹಾರ ಮತ್ತು ದೊಡ್ಡ ಪ್ರಮಾಣದ ರಾತ್ರಿಯ ಊಟವನ್ನು ಸೇವಿಸಿದ ಮಹಿಳೆಯರಿಗಿಂತ ಈ ಮಹಿಳೆಯರು ಹೆಚ್ಚು ಅಂಡೋತ್ಪತ್ತಿ ಮಾಡುತ್ತಾರೆ. ನಿಮ್ಮ ಊಟದ ಗಾತ್ರವನ್ನು ಕಡಿತಗೊಳಿಸದೆಯೇ ನಿಮ್ಮ ಬೆಳಗಿನ ಉಪಹಾರದ ಭಾಗವನ್ನು ಹೆಚ್ಚಿಸುವುದರಿಂದ ತೂಕ ಹೆಚ್ಚಾಗಬಹುದು.
• ಟ್ರಾನ್ಸ್ ಫ್ಯಾಟ್(ಕೊಬ್ಬು)ಗಳು: ಟ್ರಾನ್ಸ್ ಫ್ಯಾಟ್‍ಗಳು ಸಾಮಾನ್ಯವಾಗಿ ಹೈಡ್ರೋಜನೀಕರಿಸಿದ ಸಸ್ಯಜನ್ಯ ಎಣ್ಣೆಗಳಲ್ಲಿ ಕಂಡುಬರುತ್ತವೆ ಮತ್ತು ಸಾಮಾನ್ಯವಾಗಿ ಕೆಲವು ಮಾರ್ಗರೀನ್, ಸಂಸ್ಕರಿಸಿದ ಉತ್ಪನ್ನಗಳು, ಕರಿದ ಆಹಾರಗಳು ಮತ್ತು ಬೇಯಿಸಿದ ಉತ್ಪನ್ನಗಳಲ್ಲಿ ಇರುತ್ತವೆ. ಹೆಚ್ಚಿನ ಟ್ರಾನ್ಸ್ ಕೊಬ್ಬುಗಳು ಮತ್ತು ಕಡಿಮೆ ಅನ್‍ಸ್ಯಾಚುರೇಟೆಡ್ ಕೊಬ್ಬಿನ ಆಹಾರವು ಪುರುಷರು ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆಯೊಂದಿಗೆ ಸಂಬಂಧ ಹೊಂದಿರುತ್ತದೆ.
ನೀವು ಪಿಸಿಒಎಸ್ ಹೊಂದಿದ್ದರೆ, ಕಾರ್ಬೋಹೈಡ್ರೇಟ್(ಪಿಷ್ಟ)ಗಳನ್ನು ಕಡಿಮೆ ಮಾಡಿ
ಪಿಸಿಒಎಸ್ ಹೊಂದಿರುವ ಮಹಿಳೆಯರು ಸಾಮಾನ್ಯವಾಗಿ ಕಡಿಮೆ-ಕಾರ್ಬೋಹೈಡ್ರೇಟ್ ತಿನ್ನುವ ಯೋಜನೆಯನ್ನು ಅನುಸರಿಸಲು ಪ್ರಸ್ತಾಪಿಸಲಾಗಿದೆ, ಅಂದರೆ ಶೇ. 45 ಕ್ಕಿಂತ ಕಡಿಮೆ ಕ್ಯಾಲೋರಿಗಳು ಕಾರ್ಬೋಹೈಡ್ರೇಟ್‍ಗಳಿಂದ ಬರುತ್ತವೆ. ಕಡಿಮೆ ಕಾರ್ಬೋಹೈಡ್ರೇಟ್ ಆಹಾರಗಳ ಅಭ್ಯಾಸ ಅನುಸರಿಸುವುದು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಕೊಬ್ಬು ನಷ್ಟವಾಗುವುದನ್ನು ಪ್ರೋತ್ಸಾಹಿಸುತ್ತದೆ ಮತ್ತು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ.
• ಸಂಸ್ಕರಿಸಿದ ಕಾರ್ಬೋಹೈಡ್ರೇಟ್‍ಗಳು: ಆದ್ದರಿಂದ ನಾವು ಕಾರ್ಬೋಹೈಡ್ರೇಟ್‍ಗಳ ಬಗ್ಗೆ ಹೇಳುವಾಗ, ಕೇವಲ ಇದರ ಪ್ರಮಾಣ ಮಾತ್ರ ಮುಖ್ಯವಲ್ಲ ಆದರೆ ಯಾವ ರೀತಿಯ ಕಾರ್ಬೋಹೈಡ್ರೇಟ್‍ಗಳು ಪ್ರಯೋಜನಕಾರಿಯಾಗಿವೆ ಎಂಬುದನ್ನು ಸಹ ಪರಿಗಣಿಸಬೇಕಾಗುತ್ತ್ತದೆ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್‍ಗಳು ಸಮಸ್ಯೆಗಳನ್ನು ಉಂಟುಮಾಡಬಹುದು ಇವುಗಳಲ್ಲಿ ಸಕ್ಕರೆ ಇರುವ ಆಹಾರಗಳು ಮತ್ತು ಪಾನೀಯಗಳು ಮತ್ತು ಬಿಳಿ ಪಾಸ್ಟಾ, ಬ್ರೆಡ್ ಮತ್ತು ಅಕ್ಕಿಯನ್ನು ಒಳಗೊಂಡಿರುವ ಸಂಸ್ಕರಿಸಿದ ಧಾನ್ಯಗಳನ್ನು ಒಳಗೊಂಡಿರುವ ಆಹಾರಗಳು ಸೇರಿವೆ. ಆದ್ದರಿಂದ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‍ಗಳನ್ನು ಸೇವಿಸುವುದನ್ನು ತಪ್ಪಿಸಿ ಅಥವಾ ಸಾಧ್ಯವಾದಷ್ಟು ಕಡಿಮೆ ಸೇವಿಸಿ.
• ಫೈಬರ್(ನಾರಿನಂಶ) ಹೊಂದಿರುವ ಆಹಾರ: ಬಹಳಷ್ಟು ಫೈಬರ್ ಹೊಂದಿರುವ ಆಹಾರವು ನಿಮ್ಮ ದೇಹವು ಹೆಚ್ಚುವರಿ ಹಾರ್ಮೋನುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ಕೆಲವು ರೀತಿಯ ಫೈಬರ್‍ಗಳ ಸಹಾಯದಿಂದ ದೇಹದಲ್ಲಿನ ಹೆಚ್ಚುವರಿ ಎಸ್ಟ್ರೊಜೆನ್‍ಅನ್ನು ತೆಗೆದುಹಾಕಬಹುದು. ನಂತರ ಅದನ್ನು ದೇಹದಿಂದ ತ್ಯಾಜ್ಯ ಉತ್ಪನ್ನವಾಗಿ ತೆಗೆದುಹಾಕಲಾಗುತ್ತದೆ. ಹೆಚ್ಚಿನ ಫೈಬರ್ ಹೊಂದಿರುವ ಆಹಾರದ ಕೆಲವು ಉದಾಹರಣೆಗಳೆಂದರೆ ಧಾನ್ಯಗಳು, ಹಣ್ಣುಗಳು, ತರಕಾರಿಗಳು ಮತ್ತು ಬೀನ್ಸ್. ಮಹಿಳೆಯರಿಗೆ ದೈನಂದಿನ ಫೈಬರ್ ಸೇವನೆಯು ದಿನಕ್ಕೆ 25 ಗ್ರಾಂ ಮತ್ತು ಪುರುಷರಿಗೆ ದಿನಕ್ಕೆ 31 ಗ್ರಾಂ. ಆದ್ದರಿಂದ ಫೈಬರ್ ಅಂಶವಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ.
• ಪೆÇ್ರೀಟೀನ್ ಮೂಲಗಳು: ಸಂತಾನೋತ್ಪತ್ತಿ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡಲು ಮಾಂಸ, ಮೀನು ಮತ್ತು ಮೊಟ್ಟೆಗಳಂತಹ ಕೆಲವು ಪ್ರಾಣಿ ಪ್ರೊಟೀನ್ ಗಳನ್ನು ಬದಲಿಗೆ ಬೀನ್ಸ್, ಬೀಜಗಳು ಮತ್ತು ಬೀಜಗಳಂತಹ ತರಕಾರಿ ಪ್ರೊಟೀನ್ ಮೂಲಗಳನ್ನು ಸೇವಿಸಿ.
• ಅಧಿಕ-ಕೊಬ್ಬಿನ ಡೈರಿ ಉತ್ಪನ್ನ: ಕಡಿಮೆ-ಕೊಬ್ಬಿನ ಡೈರಿ ಉತ್ಪನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಸಂತಾನೋತ್ಪತ್ತಿ ಸಮಸ್ಯೆ ಅಪಾಯ ಹೆಚ್ಚಬಹುದು, ಆದರೆ ಹೆಚ್ಚಿನ ಕೊಬ್ಬಿನ ಡೈರಿ ಆಹಾರಗಳು ಅದನ್ನು ಕಡಿಮೆ ಮಾಡಬಹುದು. ದಿನಕ್ಕೆ ಒಂದು ಕಡಿಮೆ-ಕೊಬ್ಬಿನ ಡೈರಿ ಆಹಾರ ಸೇವನೆಯನ್ನು ಒಂದು ಹೆಚ್ಚಿನ ಕೊಬ್ಬಿನ ಡೈರಿ ಪದಾರ್ಥದೊಂದಿಗೆ ಬದಲಿಸಲು ಪ್ರಯತ್ನಿಸಿ, ಉದಾಹರಣೆಗೆ ಒಂದು ಲೋಟ ಡೋಲ್ ಮಿಲ್ಕ್ ಅಥವಾ ಪೂರ್ಣ-ಕೊಬ್ಬಿನ ಮೊಸರು.
• ಕೆಫೀನ್ ಸೇವನೆಯನ್ನು ಕಡಿತಗೊಳಿಸಿ: ಕೆಫೀನ್ ಮತ್ತು ಫರ್ಟಿಲಿಟಿಯು ನಡುವೆ ಹೆಚ್ಚಿನ ಸಂಬಂಧವನ್ನು ಹೆಚ್ಚಾಗಿ ಸಾಬೀತುಪಡಿಸದೇ ಇದ್ದರೂ, ನಿಮ್ಮ ಕಾಫಿಯ ಸೇವನೆಯನ್ನು ದಿನಕ್ಕೆ 2 ಕಪ್‍ಗಳಿಂದ ಒಂದು ಕಪ್ ಕಾಫಿಗೆ ಸೀಮಿತಗೊಳಿಸುವುದು ಇನ್ನೂ ಉತ್ತಮ ಮತ್ತು ಸುರಕ್ಷಿತವಾಗಿದೆ.
• ಆಲ್ಕೋಹಾಲ್: ಅಧಿಕ ಮದ್ಯ ಸೇವನೆಯನ್ನು ತಪ್ಪಿಸಿ. ಸಂತಾನೋತ್ಪತ್ತಿ ಸಮಸ್ಯೆ ಮೇಲೆ ಪರಿಣಾಮ ಬೀರಲು ಎಷ್ಟು ಆಲ್ಕೋಹಾಲ್ ಅಗತ್ಯವಿದೆ ಎಂಬುದು ಅಸ್ಪಷ್ಟವಾಗಿದ್ದರೂ, ಸೇವನೆಯನ್ನು ಕಡಿಮೆ ಮಾಡುವುದು ಅಥವಾ ನಿಮ್ಮ ವೈದ್ಯರ ಸಲಹೆ ಕೇಳುವುದು ಉತ್ತಮ.
ಪರಿಗಣಿಸಬೇಕಾದ ಇನ್ನೂ ಕೆಲವು ವಿಷಯಗಳು
• ಸರಿಯಾದ ಸಮಯದಲ್ಲಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿ
• ಪ್ರೊಟೀನ್ ಆ್ಯಸಿಡ್ ಸೇವಿಸಿ.
• ಆರೋಗ್ಯಕರ ಆಹಾರ ಕ್ರಮದಲ್ಲಿ ಸೇವಿಸಿ
• ಗರ್ಭನಿರೋಧಕವನ್ನು ನಿಲ್ಲಿಸಿ
• ಕೆಲವು ನಿರ್ದಿಷ್ಟ ಆಹಾರದ ಸೇವನೆಯನ್ನು ತಪ್ಪಿಸಿ
• ಫಿಟ್ ಆಗಿರಿ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ
• ಮನರಂಜನಾ ಔಷಧಗಳ ಸೇವನೆ, ಧೂಮಪಾನ ಮತ್ತು ಮದ್ಯಪಾನ ನಿಲ್ಲಿಸಿ.
ಆದರೂ, ನಿಮ್ಮ ಗರ್ಭಧಾರಣೆಯನ್ನು ಯಾವಾಗ ಪ್ರಾರಂಭಿಸಬೇಕು ಎಂಬುದನ್ನು ನಿರ್ಧರಿಸಲು ನಿಮಗೆ ಬಿಟ್ಟದ್ದು. ಆದರೆ ನಿಮಗೆ ಮೆನೋಪಾಸ್ ಬರುವ ಮುನ್ನ ನಿಮ್ಮ ಗರ್ಭಾವಸ್ಥೆಯನ್ನು ಚೆನ್ನಾಗಿ ಮತ್ತು ಬುದ್ಧಿವಂತಿಕೆಯಿಂದ ಯೋಜಿಸಿ ಎನ್ನುವ ಸಲಹೆಯನ್ನು ನಾವು ನೀಡುತ್ತೇವೆ. ನಿಮ್ಮ ಜೀವಕ್ಕೆ ಅಪಾಯವಾಗುವುದನ್ನು ತಪ್ಪಿಸಲು ತಡವಾದ ಗರ್ಭಧಾರಣೆಯನ್ನು ತಪ್ಪಿಸಿ. ನೀವು ಬಯಸಿದಾಗಲೆಲ್ಲಾ ನಿಮ್ಮ ಗರ್ಭಾವಸ್ಥೆಯನ್ನು ಯೋಜಿಸಲು ಸಹಾಯ ಮಾಡುವ ಹಾಗೂ ಫರ್ಟಿಲಿಟಿ ಚಿಕಿತ್ಸೆಗಳಲ್ಲ್ಲಿ ಪರಿಣತಿ ಹೊಂದಿರುವ ವೈದ್ಯರು ಇದ್ದಾರೆ ಎನ್ನುವುದು ನೆನಪಿರಲಿ.