ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ಐಸಿಎಸ್ಐ)
ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ಐಸಿಎಸ್ಐ) ಎಂದರೇನು?
ಫರ್ಟಿಲೈಸೇಷನ್(ಫಲೀಕರಣ) ಸಂಭವಿಸಿದಾಗ, ವೀರ್ಯಾಣುವಿನ ತಲೆಯು ಅಂಡಾಣುವಿನ ಹೊರಗಿನ ಗೋಡೆಗೆ ಅಂಟಿಕೊಳ್ಳಬೇಕು. ಒಮ್ಮೆ ಅದು ಅಂಟಿಕೊಂಡರೆ, ವೀರ್ಯಾಣುವು ಹೊರ ಪದರದ ಮೂಲಕ ಅಂಡಾಣುವಿನ ಒಳಭಾಗಕ್ಕೆ (ಸೈಟೋಪ್ಲಾಸಂ) ತಳ್ಳಿಕೊಂಡು ಹೋಗುತ್ತದೆ. ಅಲ್ಲಿ ಫರ್ಟಿಲೈಸೇಷನ್ ಸಂಭವಿಸುತ್ತದೆ.
ಕೆಲವೊಮ್ಮೆ ವೀರ್ಯಾಣುವು ಹಲವಾರು ಕಾರಣಗಳಿಂದಾಗಿ ಹೊರ ಪದರವನ್ನು ಭೇದಿಸುವುದಿಲ್ಲ. ಹೊರಗಿನ ಪದರವು ದಪ್ಪವಾಗಿರಬಹುದು, ಇದರಿಂದ ವೀರ್ಯ ಭೇದಿಸಲು ಕಷ್ಟವಾಗುತ್ತದೆ. ವೀರ್ಯವು ಈಜಲು ಸಾಧ್ಯವಾಗದಿರಬಹುದು. ಈ ಸಂದರ್ಭಗಳಲ್ಲಿ, ಇಂಟ್ರಾಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ (ಐಸಿಎಸ್ಐ) ಎಂಬ ವಿಧಾನವನ್ನು ಇನ್ ವಿಟ್ರೋ ಫರ್ಟಿಲೈಸೇಷನ್ (ಐವಿಎಫ್) ಜೊತೆಗೆ ಕೈಗೊಂಡು ಅಂಡಾಣುವಿನೊಂದಿಗೆ ಫರ್ಟಿಲೈಸೇಷನ್ ನಡೆಯಲು ಸಹಾಯ ಮಾಡಬಹುದು. ಐಸಿಎಸ್ಐ ಸಮಯದಲ್ಲಿ ಒಂದು ವೀರ್ಯಾಣುವನ್ನು ನೇರವಾಗಿ ಅಂಡಾಣುವಿನ ಸೈಟೋಪ್ಲಾಸಂಗೆ ಚುಚ್ಚಲಾಗುತ್ತದೆ.
ಐಸಿಎಸ್ಐ-ಐವಿಎಫ್ ಹೇಗೆ ಕೆಲಸ ಮಾಡುತ್ತದೆ?
ಐಸಿಎಸ್ಐ, ಐವಿಎಫ್ನ ಒಂದು ಭಾಗವಾಗಿದೆ. ಐಸಿಎಸ್ಐ ಪ್ರಯೋಗಾಲಯದಲ್ಲಿ ನಡೆಯುವುದರಿಂದ, ಐವಿಎಫ್ ಚಿಕಿತ್ಸೆಯು ಐಸಿಎಸ್ಐ ಇಲ್ಲದೆ ನಡೆಯಲ್ಲ ಅಥವಾ ಐವಿಎಫ್ ಚಿಕಿತ್ಸೆಗಿಂತ ಹೆಚ್ಚು ಭಿನ್ನವಾಗಿರುವುದಿಲ್ಲ.
ಸಾಮಾನ್ಯ ಐವಿಎಫ್ನಂತೆಯೇ, ಸ್ತ್ರೀ ಸಂಗಾತಿಯು ಅಂಡಾಶಯವನ್ನು ಉತ್ತೇಜಿಸುವ ಔಷಧಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ನಿಮ್ಮ ವೈದ್ಯರು ರಕ್ತ ಪರೀಕ್ಷೆಗಳು ಮತ್ತು ಅಲ್ಟ್ರಾಸೌಂಡ್ಗಳೊಂದಿಗೆ ನಿಮ್ಮ ಪ್ರಗತಿಯ ಮೇಲ್ವಿಚಾರಣೆ ಮಾಡುತ್ತಾರೆ. ಹೆಣ್ಣು ಸಾಕಷ್ಟು ಉತ್ತಮ ಗಾತ್ರದ ಕಿರುಚೀಲ(ಫಾಲಿಕಲ್ಗಳು)ಗಳನ್ನು ಬೆಳೆಸಿದ ನಂತರ,ಅಂಡಾಣು ಮರುಪಡೆಯುವಿಕೆಗೆ ಒಳಗಾಗುತ್ತಾಳೆ. ಅಲ್ಲಿ ವಿಶೇಷ ಅಲ್ಟ್ರಾಸೌಂಡ್-ಮಾರ್ಗದರ್ಶಿತ ಸೂಜಿಯೊಂದಿಗೆ ನಿಮ್ಮ ಅಂಡಾಶಯದಿಂದ ಅಂಡಾಣುವನ್ನು ತೆಗೆಯಲಾಗುತ್ತದೆ.ನಿಮ್ಮ ಪುರುಷ ಸಂಗಾತಿಯೂ ಅದೇ ದಿನ ತಮ್ಮ ವೀರ್ಯಾಣು ಮಾದರಿಯನ್ನು ಒದಗಿಸುತ್ತಾರೆ (ವೀರ್ಯಾಣು ದಾನಿ ಅಥವಾ ಹಿಂದೆ ಹೆಪ್ಪುಗಟ್ಟಿದ ವೀರ್ಯಾಣುವನ್ನು ಬಳಸದ ಹೊರತು.).
ಐವಿಎಫ್ ಮೂಲಕ ಅಂಡಾಣುವನ್ನು ಫರ್ಟಿಲೈಸ್ ಆಗಿಸಲು ಎರಡು ಮಾರ್ಗಗಳಿವೆ: ಸಾಂಪ್ರದಾಯಿಕ ಮತ್ತು ಐಸಿಎಸ್ಐ. ಸಾಂಪ್ರದಾಯಿಕ ಐವಿಎಫ್ ನಲ್ಲಿ, ಪ್ರಯೋಗಾಲಯದ ಡಿಶ್ನಲ್ಲಿ 50,000 ಅಥವಾ ಹೆಚ್ಚಿನ ಈಜುವ ವೀರ್ಯಾಣುವನ್ನು ಅಂಡಾಣು ಪಕ್ಕದಲ್ಲಿ ಇರಿಸಲಾಗುತ್ತದೆ. ವೀರ್ಯಾಣು ಒಂದು ಅಂಡಾಣುವಿನ ಸೈಟೋಪ್ಲಾಸಂಗೆ ಪ್ರವೇಶಿಸಿದಾಗ ಫರ್ಟಿಲೈಸೇಷನ್ ಸಂಭವಿಸುತ್ತದೆ. ಐಸಿಎಸ್ಐ ಪ್ರಕ್ರಿಯೆಯಲ್ಲಿ, ಒಂದು ಚಿಕ್ಕ ಸೂಜಿಯಿರುವ ಮೈಕ್ರೊಪಿಪೆಟ್ ಒಂದು ವೀರ್ಯಾಣುವನ್ನು ಅಂಡಾಣು ಒಳಕ್ಕೆ ಸೇರಿಸುತ್ತದೆ. ಸಾಂಪ್ರದಾಯಿಕ ಐವಿಎಫ್ ಅಥವಾ ಐಸಿಎಸ್ಐನೊಂದಿಗೆ ಒಮ್ಮೆ ಫರ್ಟಿಲೈಸೇಷನ್ ಸಂಭವಿಸಿದಾಗ, ಭ್ರೂಣವು 1 ರಿಂದ 5 ದಿನಗಳವರೆಗೆ ಪ್ರಯೋಗಾಲಯದಲ್ಲಿ ಬೆಳೆಯುತ್ತದೆ. ನಂತರ ಅದನ್ನು ಮಹಿಳೆಯ ಗರ್ಭಾಶಯಕ್ಕೆ (ಗರ್ಭಕೋಶಕ್ಕೆ) ಸೇರಿಸಲಾಗುತ್ತದೆ.
ಇವುಗಳ ಜೊತೆಗೆ, ಕೆಲವು ಕ್ರೋಮೋಸೋಮಲ್ ಅಥವಾ ಹಾರ್ಮೋನ್ ಅಸ್ವಸ್ಥತೆಗಳು ಅಥವಾ ವ್ಯಾಸೆಕ್ಟಮಿಯಂತಹ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಅಥವಾ ಯಾವುದೇ ರೋಗಲಕ್ಷಣಗಳಿಂದ ನೀವು ಬಳಲುತ್ತಿದ್ದರೆ, ಆರೋಗ್ಯಸೇವಾ ವೃತ್ತಿಪರರನ್ನು ಸಂಪರ್ಕಿಸಿ. ಇದರಿಂದ ಮೂಲ ಕಾರಣವನ್ನು ಉತ್ತಮವಾಗಿ ಗುರುತಿಸಿ ವಿವರಿಸಲು ನೆರವಾಗುತ್ತದೆ. ಇದಲ್ಲದೇ ಸರಿಯಾದ ಚಿಕಿತ್ಸಾ ವಿಧಾನವನ್ನು ಅಥವಾ ಕಾರ್ಯವಿಧಾನವನ್ನು ನಿರ್ಧರಿಸಲು ಇದು ಸಹಾಯ ಮಾಡುತ್ತದೆ. ಕಾರಣವನ್ನು ಗುರುತಿಸಿದ ನಂತರ, ವೈದ್ಯರು ನಿರ್ದಿಷ್ಟ ವಿಧಾನವನ್ನು ಶಿಫಾರಸು ಮಾಡಬಹುದು. ಪುರುಷ ಸಂತಾನೋತ್ಪತ್ತಿ ಸಮಸ್ಯೆಗೆ ಚಿಕಿತ್ಸೆ ನೀಡಲು ವಿವಿಧ ವಿಧಾನಗಳಿವೆ.
ನನಗೆ ಐಸಿಎಸ್ಐ ಏಕೆ ಅಗತ್ಯವಿರುತ್ತದೆ?
• ಫರ್ಟಿಲಿಟಿ ಸಮಸ್ಯೆಗಳನ್ನು ನಿವಾರಿಸಲು ಐಸಿಎಸ್ಐ ಸಹಾಯ ಮಾಡುತ್ತದೆ, ಉದಾಹರಣೆಗೆ:
• ಕೃತಕ ಗರ್ಭಧಾರಣೆ ಮಾಡಲು ಕಡಿಮೆ ವೀರ್ಯಾಣು ಉತ್ಪಾದನೆ (ಗರ್ಭಾಶಯದ ಒಳಗಿನ ಗರ್ಭಧಾರಣೆ [ಐಯುಐ]) ಅಥವಾ ಐವಿಎಫ್.
• ವೀರ್ಯಾಣು ಸಾಮಾನ್ಯ ರೀತಿಯಲ್ಲಿ ಚಲಿಸದೇ ಇರಬಹುದು.
• ವೀರ್ಯಾಣು ಅಂಡಾಣುವಿಗೆ ಅಂಟಿಕೊಳ್ಳುವಲ್ಲಿ ತೊಂದರೆ ಇದೆ.
• ಪುರುಷ ಸಂತಾನೋತ್ಪತ್ತಿ ನಾಳದಲ್ಲಿ ಅಡೆತಡೆಯಿದ್ದು ವೀರ್ಯಾಣು ಹೊರಬರದಂತೆ ತಡೆಯಬಹುದು.
• ವೀರ್ಯಾಣುವಿನ ಆರೋಗ್ಯ ಏನೇ ಇರಲಿ ಅಂಡಾಣು ಸಾಂಪ್ರದಾಯಿಕ ಐವಿಎಫ್ನಿಂದ ಫರ್ಟಿಲೈಸ್ ಆಗದೇ ಇರುವುದು.
• ಇನ್ ವಿಟ್ರೋ ಮೆಚ್ಯೂರ್ಡ್ ಅಂಡಾಣುಗಳನ್ನು ಬಳಸಲಾಗುತ್ತದೆ.
• ಹಿಂದೆ ಹೆಪ್ಪುಗಟ್ಟಿದ ಅಂಡಾಣುಗಳನ್ನು ಬಳಸಿರುವುದು.
• ಹಿಂದಿನ ಐವಿಎಫ್ ಆವರ್ತನ ವಿಫಲವಾಗಿರುವುದು.
• ಕಡಿಮೆ ವೀರ್ಯಾಣು (ಆಲಿಗೋಸ್ಪರ್ಮಿಯಾ) ಅಥವಾ ಶೂನ್ಯ ವೀರ್ಯಾಣು (ಅಜೂಸ್ಪರ್ಮಿಯಾ) ಹೊಂದಿರುವ ಪುರುಷರು.
ಐಸಿಎಸ್ಐ ಕೆಲಸ ಮಾಡುತ್ತದೆಯೇ? ಯಶಸ್ಸಿನ ಮಟ್ಟ:
50% ರಿಂದ 80% ಅಂಡಾಣುಗಳನ್ನು ಐಸಿಎಸ್ಐ ಫರ್ಟಿಲೈಸ್ ಮಾಡುತ್ತದೆ. ಐವಿಎಫ್ ಮತ್ತು ಐಸಿಎಸ್ಐ ಯಶಸ್ಸಿನ ಪ್ರಮಾಣ ಒಂದೇ ಆಗಿರುತ್ತದೆ. ಎಲ್ಲಾ ಅಂಡಾಣುಗಳು ಐಸಿಎಸ್ಐ- ಐವಿಎಫ್ನೊಂದಿಗೆ ಫರ್ಟಿಲೈಸ್ ಆಗುವುದಿಲ್ಲ. ಅಂಡಾಣು ಒಳಗೆ ವೀರ್ಯಾಣುವನ್ನು ಚುಚ್ಚಿದಾಗಲೂ ಫರ್ಟಿಲೈಸೇಷನ್ ಖಾತರಿಯಿರುವುದಿಲ್ಲ.
ಫರ್ಟಿಲೈಸೇಷನ್ ಮಟ್ಟಗಳು ನಿಮಗೆ ಕ್ಲಿನಿಕಲ್ ಗರ್ಭಧಾರಣೆ ಅಥವಾ ಜನನ ದರಗಳನ್ನು ಹೇಳುವುದಿಲ್ಲ ಎಂಬುದನ್ನು ನೆನಪಿಡಿ. ಐಸಿಎಸ್ಐ ಪ್ರಕ್ರಿಯೆಯು ಈ ಕೆಳಗಿನ ಸಮಸ್ಯೆಗಳಿಗೆ ಕಾರಣವಾಗಬಹುದು:
ಕೆಲವು ಅಥವಾ ಎಲ್ಲಾ ಅಂಡಾಣುಗಳು ಕೂಡ ಹಾನಿಗೊಳಗಾಗಬಹುದು.
ವೀರ್ಯಾಣು ಚುಚ್ಚುಮದ್ದಿನ ನಂತರವೂ ಅಂಡಾಣು ಭ್ರೂಣವಾಗಿ ಬೆಳೆಯದಿರಬಹುದು.
ಭ್ರೂಣವು ಬೆಳೆಯುವುದನ್ನು ನಿಲ್ಲಿಸಬಹುದು.
ಒಮ್ಮೆ ಫರ್ಟಿಲೈಸೇಷನ್ ಸಂಭವಿಸಿದಾಗ, ಐಸಿಎಸ್ಐಯೊಂದಿಗೆ ಅಥವಾ ಐವಿಎಫ್ ಹೊಂದಿದ್ದರೆ ದಂಪತಿಗಳು ಒಂದೇ ಮಗು, ಅವಳಿ ಅಥವಾ ತ್ರಿವಳಿಗಳಿಗೆ ಜನ್ಮ ನೀಡುವ ಅವಕಾಶ ಒಂದೇ ಆಗಿರುತ್ತದೆ.
ಮಗುವಿನ ಬೆಳವಣಿಗೆಯ ಮೇಲೆ ಐಸಿಎಸ್ಐ ಪರಿಣಾಮ ಬೀರಬಹುದೇ?
ಮಹಿಳೆ ಸ್ವಾಭಾವಿಕವಾಗಿ ಗರ್ಭಿಣಿಯಾಗಿದ್ದರೆ, ಮಗುವಿಗೆ ನ್ಯೂನತೆಗಳಾಗುವ ಸಾಧ್ಯತೆ ಶೇ. 1.5 ರಿಂದ ಶೇ. 3ರವರೆಗೆ ಇರುತ್ತದೆ. ಐಸಿಎಸ್ಐಗೆ ಸಂಬಂಧಿಸಿದ ದೋಷವು ಐವಿಎಫ್ಗೆ ಇದ್ದಂತೆಯೇ ಇರುತ್ತದೆ. ಆದರೆ ನೈಸರ್ಗಿಕ ಗರ್ಭಧಾರಣೆಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ.
ದೋಷಗಳ ಹೆಚ್ಚಿನ ಅಪಾಯವು ಸಂತಾನೋತ್ಪತ್ತಿ ಸಮಸ್ಯೆ ಕಾರಣದಿಂದಾಗಿರಬಹುದು, ಆದರೆ ಈ ಸಮಸ್ಯೆಯಿಂದ ಹೊರಬರಲು ಬಳಸುವ ಚಿಕಿತ್ಸೆಗಳಿಂದಲ್ಲ.
ಬೆಕ್ವಿತ್-ವೈಡೆಮನ್ ಸಿಂಡ್ರೋಮ್, ಏಂಜೆಲ್ಮನ್ ಸಿಂಡ್ರೋಮ್, ಹೈಪೆರ್ಸ್ಪಾಡಿಯಾಸ್ ಅಥವಾ ಲೈಂಗಿಕ ವರ್ಣತಂತು ಅಸಹಜತೆಗಳಂತಹ ಕೆಲವು ಪರಿಸ್ಥಿತಿಗಳು ಐಸಿಎಸ್ಐ ಬಳಕೆಯೊಂದಿಗೆ ಸಂಬಂಧ ಹೊಂದಿವೆ. ಈ ತಂತ್ರವನ್ನು ಬಳಸಿಕೊಂಡು ಗರ್ಭಧರಿಸಿದ ಶೇ. 1 ಕ್ಕಿಂತ ಕಡಿಮೆ ಮಕ್ಕಳಲ್ಲಿ ಅವು ಸಂಭವಿಸುತ್ತವೆ.
ಸಂತಾನೋತ್ಪತ್ತಿ ತೊಂದರೆಗೆ ಕಾರಣವಾಗುವ ಕೆಲವು ಸಮಸ್ಯೆಗಳು ಆನುವಂಶಿಕವೂ ಆಗಿರಬಹುದು. ಉದಾಹರಣೆಗೆ, ಐಸಿಎಸ್ಐ ಬಳಕೆಯಿಂದ ಗರ್ಭಧರಿಸಿದ ಗಂಡು ಮಕ್ಕಳು ತಮ್ಮ ತಂದೆಗೆ ಸಮಾನವಾದ ಸಂತಾನೋತ್ಪತ್ತಿ ಸಮಸ್ಯೆಗಳನ್ನು ಹೊಂದಿರಬಹುದು.
ಗರ್ಭಗುಡಿ ಐವಿಎಫ್ ಕೇಂದ್ರದಲ್ಲಿ ಐವಿಎಫ್ ಮತ್ತು ಐಸಿಎಸ್ಐ:
ಗರ್ಭಗುಡಿ ಐವಿಎಫ್ ಕೇಂದ್ರದಲ್ಲಿರುವ ನಮ್ಮ ಪರಿಣಿತ ಫರ್ಟಿಲಿಟಿ ಸಲಹೆಗಾರರು ಅಗತ್ಯವಿರುವಂತೆ ಫರ್ಟಿಲಿಟಿಯ ತನಿಖೆಗಳ ಆಧಾರದ ಮೇಲೆ ನಿಮ್ಮ ಅಗತ್ಯಗಳಿಗಾಗಿ ಉತ್ತಮ ಫರ್ಟಿಲಿಟಿ ಚಿಕಿತ್ಸೆಯನ್ನು ನಿಮಗೆ ಸಲಹೆ ನೀಡುತ್ತಾರೆ. ಕೈಗೆಟುಕುವ ವೆಚ್ಚದಲ್ಲಿ ಐವಿಎಫ್ ಮತ್ತು ಐಸಿಎಸ್ಐಗಾಗಿ ನಾವು ವಿಶ್ವ ಮಟ್ಟದ ಯಶಸ್ಸಿನ ಫಲಿತಾಂಶಗಳನ್ನು ಹೊಂದಿದ್ದೇವೆ.