ವಿದ್ಯಾಲಕ್ಷ್ಮಿ ಎ.

ವಿದ್ಯಾಲಕ್ಷ್ಮಿ ಎ.

MSc (Biomedical Sciences), P.G diploma (Clinical Embryology), Fellowship in Embryology & Andrology (Australia)
ಭ್ರೂಣಶಾಸ್ತ್ರಜ್ಞೆ
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) :
ತಿಳಿದಿರುವ ಭಾಷೆಗಳು:

ವಿದ್ಯಾಲಕ್ಷ್ಮಿ ಗರ್ಭಗುಡಿ ಐವಿಎಫ್‌ಸೆಂಟರ್‌ನ ಹಿರಿಯ ಭ್ರೂಣಶಾಸ್ತ್ರಜ್ಞೆ ಮತ್ತು ಲ್ಯಾಬ್‌ಮ್ಯಾನೇಜರ್‌ಆಗಿದ್ದಾರೆ. ಬಯೋಮೆಡಿಕಲ್‌ಸೈನ್ಸೆಸ್‌ಮತ್ತು ಕ್ಲಿನಿಕಲ್‌ಎಂಬ್ರಿಯಾಲಜಿಯಲ್ಲಿ ಅದ್ಭುತ ಶೈಕ್ಷಣಿಕ ಹಿನ್ನೆಲೆಯಿರೋ ವಿದ್ಯಾಲಕ್ಷ್ಮಿ ಆ ಕ್ಷೇತ್ರದಲ್ಲಿ ಅಪಾರ ವೃತ್ತಿಪರ ಅನುಭವ ಮತ್ತು ಅರ್ಹತೆ ಎರಡನ್ನೂ ಗಳಿಸಿದ್ದಾರೆ. ವಿದ್ಯಾಲಕ್ಷ್ಮಿಯವರು ಬಯೋಮೆಡಿಕಲ್‌ಸೈನ್ಸಸ್‌ನಲ್ಲಿ ಸ್ನಾತಕೋತ್ತರ ಪದವಿ, ಕ್ಲಿನಿಕಲ್‌ಎಂಬ್ರಿಯೋಲಜಿಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ಆಸ್ಟ್ರೇಲಿಯಾದ ಪ್ರತಿಷ್ಠಿತ ಆಸ್ಪತ್ರೆಯಿಂದ ಎಂಬ್ರಿಯೋಲಜಿ ಮತ್ತು ಆಂಡ್ರೋಲಜಿಯಲ್ಲಿ ಫೆಲೋಶಿಪ್‌ಗೌರವವನ್ನೂ ಪಡೆದಿದ್ದಾರೆ.

ಕಳೆದ ಒಂಬತ್ತು ವರ್ಷಗಳಿಂದ ಐವಿಎಫ್‌ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ವಿದ್ಯಾಲಕ್ಷ್ಮಿ ಎಂಬ್ರಿಯೋಲಜಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಹತ್ತರವಾದುದು. ಹಲವು ವೆಬಿನಾರ್‌ಮತ್ತು CME ಗೋಷ್ಠಿಗಳನ್ನ ಸಂಯೋಜಿಸುವುದರ ಹಿಂದೆ ವಿದ್ಯಾಲಕ್ಷ್ಮಿ ಅವರ ಪ್ರಮುಖ ಪಾತ್ರವಿದ್ದು ಅಲ್ಲಿ ಅವರು ತಮ್ಮ ಅನುಭವ ಮತ್ತು ಅನಿಸಿಕೆಗಳನ್ನ ಉದಯೋನ್ಮುಖ ಭ್ರೂಣಶಾಸ್ತ್ರಜ್ಞರೊಂದಿಗೆ ಹಂಚಿಕೊಳ್ಳುತ್ತಾರೆ.

ಗರ್ಭಗುಡಿ ಐವಿಎಫ್‌ಸೆಂಟರ್‌ಅಲ್ಲದೆ ಗರ್ಭಗುಡಿ ಸಂತಾನೋತ್ಪತ್ತಿ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಾಪಕಿಯಾಗಿಯೂ ವಿದ್ಯಾಲಕ್ಷ್ಮಿ ಕೆಲಸ ಮಾಡ್ತಿದ್ದಾರೆ. ಎಂಬ್ರಿಯಾಲಜಿ ಕ್ಷೇತ್ರದಲ್ಲಿ ಕಲಿಯುವಂಥ ವಿದ್ಯಾರ್ಥಿಗಳಿಗೆ ವಿದ್ಯಾಲಕ್ಷ್ಮಿ ಅವರ ಅನುಭವ, ಸೂಕ್ತ ಮಾರ್ಗದರ್ಶನ ಮತ್ತು ತರಬೇತಿ ನೀಡುವಲ್ಲಿ ಸಹಾಯಕವಾಗಿದೆ.

ವಿದ್ಯಾಲಕ್ಷ್ಮಿ ಕಾಯಕವೇ ಕೈಲಾಸ ತತ್ವವನ್ನು ನಂಬಿದವರು. ಸದಾ ಕ್ರಿಯಾಶೀಲೆ. ಸಂಶೋಧನೆಯೆಡೆಗಿನ ಆಸಕ್ತಿ ಮತ್ತು ಅಪಾರ ಅನುಭವ ಅವರನ್ನು ಗರ್ಭಗುಡಿ ಐವಿಎಫ್‌ಸೆಂಟರ್‌ನ ಪ್ರಮುಖ ಸದಸ್ಯೆಯನ್ನಾಗಿಸಿದೆ. ಭ್ರೂಣಶಾಸ್ತ್ರ ಕ್ಷೇತ್ರಕ್ಕೆ ವಿದ್ಯಾಲಕ್ಷ್ಮಿ ನೀಡಿರುವ ಕೊಡುಗೆ ಉದ್ಯಮದಲ್ಲಿ ಖ್ಯಾತಿ ಗಳಿಸುವಂತೆ ಮಾಡಿದೆ.

ಈ ಪುಟವನ್ನು ಹಂಚಿಕೊಳ್ಳಿ