ಡಾ. ಸಹನಾ ಕೆ

ಡಾ. ಸಹನಾ ಕೆ

MBBS, MS (OBG), DNB(OBG), FRM
ಫಲವತ್ತತೆ ತಜ್ಞರು
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) : 110364
ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು, ಮರಾಠಿ

ನಿಮ್ಮ ನೇಮಕಾತಿಯನ್ನು ಕಾಯ್ದಿರಿಸಿ

ಶಾಖೆ
ಆವರಣದಲ್ಲಿ
ಆನ್ಲೈನ್

* ನೇಮಕಾತಿಗಳು ವೈದ್ಯರ ಲಭ್ಯತೆಗೆ ಒಳಪಟ್ಟಿರುತ್ತವೆ. ದಯವಿಟ್ಟು, ನೀವು ಈಗಾಗಲೇ ಗರ್ಭಗುಡಿಗೆ ಭೇಟಿ ನೀಡಿದ್ದರೆ ನಿಮ್ಮ ನೋಂದಾಯಿತ ಸಂಖ್ಯೆಯನ್ನು ನೀವು ನೀಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಡಾ. ಸಹನಾ ಕೆ. ಅವರು ಗರ್ಭಗುಡಿ ಐವಿಎಫ್‌ ಸೆಂಟರ್‌ನ ಹೆಮ್ಮೆಯ ಫಲವತ್ತತೆ ತಜ್ಞರಾಗಿದ್ದಾರೆ. ಪ್ರಸೂತಿ, ಸ್ತ್ರೀರೋಗ ಶಾಸ್ತ್ರ ಮತ್ತು ಸಂತಾನೋತ್ಪತ್ತಿ ವೈದ್ಯಶಾಸ್ತ್ರದಲ್ಲಿ ಅಪಾರ ಅನುಭವ ಮತ್ತು ಪರಿಣಿತಿ ಹೊಂದಿರುವ ಡಾ. ಸಹನಾ, ಮಕ್ಕಳಿಲ್ಲದ ದಂಪತಿಗಳ ಕನಸನ್ನು ನನಸು ಮಾಡಲು ಸಹಾಯ ಮಾಡುತ್ತಿದ್ದಾರೆ.

ಡಾ. ಸಹನಾ ಅವರು ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆ ಉಳ್ಳವರಾಗಿದ್ದು, ವೃತ್ತಿಕ್ಷೇತ್ರದಲ್ಲಿ ತಮ್ಮನ್ನು ತಾವು ಸಮರ್ಪಣಾ ಭಾವದಿಂದ ತೊಡಗಿಸಿಕೊಂಡಿದ್ದಾರೆ. 2009 ಮತ್ತು 2014ರ ನಡುವೆ ದಾವಣಗೆರೆಯ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ MBBS ಪದವಿ ಪಡೆದುಕೊಂಡರು. ನಂತರ 2016-2019ರಲ್ಲಿ ಸೋಲಾಪುರದ ಡಾ. ವಿ. ಎಮ್‌ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಎಂಸ್‌ (ಒಬಿಜಿ) ಪದವಿ ಗಳಿಸಿದರು. ನಂತರ ಡಾ. ಸಹನಾ ನವೆಂಬರ್ 2020 ರಲ್ಲಿ, ನವದೆಹಲಿಯ ಭಾರತದ ರಾಷ್ಟ್ರೀಯ ಪರೀಕ್ಷಾ ಮಂಡಳಿಯಿಂದ DNB (OBG) ಸ್ನಾತಕೋತ್ತರ ಪದವಿ ಪಡೆದುಕೊಂಡರು. ಅಲ್ಲದೆ ಬೆಂಗಳೂರಿನ ಪ್ರತಿಷ್ಠಿತ ಗುಣಶೀಲ ಸರ್ಜಿಕಲ್ ಮತ್ತು ಮೆಟರ್ನಿಟಿ ಆಸ್ಪತ್ರೆಯಲ್ಲಿ ಸಂತಾನೋತ್ಪತ್ತಿ ಔಷಧದಲ್ಲಿ ಫೆಲೋಶಿಪ್ ಪಡೆದಿದ್ದಾರೆ.

ಡಾ. ಸಹನಾ ಅವರು ವೃತ್ತಿಪರತೆಯಲ್ಲಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ವ್ಯಾಪಕ ಅನುಭವ ಗಳಿಸಿದ್ದಾರೆ. ಜೂನ್ 2019 ರಿಂದ ಅಕ್ಟೋಬರ್ 2020 ರವರೆಗೆ ಸೋಲಾಪುರದ ಡಾ. ವಿ.ಎಂ. ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀನಿಯರ್‌ ರೆಸಿಡೆಂಟ್‌ ಆಗಿ ಸೇವೆ ಸಲ್ಲಿಸಿದರು. ಅಲ್ಲಿ ಅವರು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಂಡರು. ನಂತರ, ಅವರು ಫೆಬ್ರವರಿ 2022 ರಿಂದ ಜೂನ್ 2022 ರವರೆಗೆ ಬೆಂಗಳೂರಿನ ಕಾಂಗರೂ ಕೇರ್ ಆಸ್ಪತ್ರೆಯಲ್ಲಿ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದರು. ಸೆಪ್ಟೆಂಬರ್ 2023 ರಿಂದ ಅಕ್ಟೋಬರ್ 2024 ರವರೆಗೆ ದುಬೈನ ಬೆಟರ್ ಲೈಫ್ ಕ್ಲಿನಿಕ್‌ನಲ್ಲಿ OBGY ಸ್ಪೆಷಲಿಸ್ಟ್ ಆಗಿ ತಮ್ಮ ಪರಿಣಿತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದ್ದಾರೆ.

ಡಾ. ಸಹನಾ ಅವರಿಗಿರುವ ವೈವಿಧ್ಯಮಯ ಶಿಕ್ಷಣ ಮತ್ತು ವೃತ್ತಿಪರ ಹಿನ್ನೆಲೆಯಿಂದಾಗಿ ಅತ್ಯಂತ ಸಂಕೀರ್ಣವಾದ ಫಲವತ್ತತೆಯ ಸವಾಲುಗಳನ್ನು ಸಹ ತಮ್ಮ ಜ್ಞಾನ ಮತ್ತು ಕೌಶಲ್ಯದಿಂದ ಪರಿಹರಿಸಬಲ್ಲವರಾಗಿದ್ದಾರೆ. ದಂಪತಿಗಳ ಬಗ್ಗೆ ತೋರುವ ಪ್ರೀತಿ ಮತ್ತು ಕಾಳಜಿ, ಸಂತಾನೋತ್ಪತ್ತಿ ಕ್ಷೇತ್ರದಲ್ಲಿರುವ ಸಮರ್ಪಣಾ ಭಾವ ಅವರನ್ನು ಗರ್ಭಗುಡಿ ಐವಿಎಫ್‌ ಸೆಂಟರ್‌ ತಂಡದಲ್ಲಿ ಪ್ರಮುಖ ವೈದ್ಯೆಯನ್ನಾಗಿಸಿದೆ. ಡಾ. ಸಹನಾ ಅವರ ಉದ್ದೇಶ ಕೇವಲ ಚಿಕಿತ್ಸೆ ನೀಡುವುದು ಮಾತ್ರವಲ್ಲ ದಂಪತಿಗಳಿಗೆ ಭಾವನಾತ್ಮಕ ಮತ್ತು ಆರಾಮದಾಯಕತೆಯನ್ನು ಒದಗಿಸುವುದಾಗಿದೆ.

ಶೈಕ್ಷಣಿಕ ಜ್ಞಾನ, ಜಾಗತಿಕ ಅನುಭವ ಮತ್ತು ಸಹಾನುಭೂತಿಯ ಸ್ಪರ್ಶದೊಂದಿಗೆ ಡಾ. ಸಹನಾ ಸಂತಾನೋತ್ಪತ್ತಿ ಸಮಸ್ಯೆಯಿಂದ ಬಳಲುತ್ತಿರುವ ದಂಪತಿಗಳ ಕನಸನ್ನು ನನಸಾಗಿಸಲು ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅಧುನಿಕ IVF ಕಾರ್ಯವಿಧಾನಗಳಾಗಿರಬಹುದು, ಹಾರ್ಮೋನ್ ಚಿಕಿತ್ಸೆಗಳು ಅಥವಾ ಫಲವತ್ತತೆ ಸಮಾಲೋಚನೆಯಾಗಿರಬಹುದು, ಡಾ. ಸಹನಾ ತನ್ನಲ್ಲಿಗೆ ಬರವ ದಂಪತಿಗಳಿಗೆ ಅತ್ಯುನ್ನತ ಗುಣಮಟ್ಟದ ಆರೈಕೆಯನ್ನುನೀಡುತ್ತಾರೆ.

ಡಾ. ಸಹನಾ ಅವರೊಂದಿಗೆ ಸಮಾಲೋಚಿಸಲು ಮತ್ತು ನಿಮ್ಮ ತಾಯ್ತನದ ಕನಸನ್ನು ನನಸಾಗಿಸಿಕೊಳ್ಳಲು ನಮ್ಮನ್ನು ಸಂಪರ್ಕಿಸಬಹುದು.

ಈ ಪುಟವನ್ನು ಹಂಚಿಕೊಳ್ಳಿ