ಡಾ. ರಂಜಿತಾ ಕೆ. ಎ

ಡಾ. ರಂಜಿತಾ ಕೆ. ಎ

ಬ್ಯಾಚ್ಯುಲರ್‌ ಆಫ್‌ ನ್ಯಾಚ್ಯುರೋಪತಿ ಮತ್ತು ಯೋಗಿಕ್‌ ಸೈನ್ಸಸ್‌ (BNYS)
ಯೋಗ ಶಿಕ್ಷಕಿ
ವೈದ್ಯಕೀಯ ನೋಂದಣಿ ಸಂಖ್ಯೆ (ಕೆಎಂಸಿ) :
ತಿಳಿದಿರುವ ಭಾಷೆಗಳು: ಕನ್ನಡ, ಇಂಗ್ಲಿಷ್‌

ಡಾ. ರಂಜಿತಾ ಕೆ. ಎ. ಅವರು ಒಬ್ಬ ಅನುಭವೀ ಯೋಗ ಶಿಕ್ಷಕಿಯಾಗಿದ್ದಾರೆ. ಯೋಗ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಅನುಸರಿಸಿ ಆ ಮೂಲಕ ಸಮಗ್ರ ಚಿಕಿತ್ಸೆಯಿಂದ ದಂಪತಿಗಳ ಆರೋಗ್ಯ ಹೆಚ್ಚಿಸಲು ಡಾ. ರಂಜಿತಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಡಾ. ರಂಜಿತಾ ಅವರು ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಕಾಲೇಜಿನಿಂದ ಬ್ಯಾಚ್ಯುಲರ್‌ ಆಫ್‌ ನ್ಯಾಚ್ಯುರೋಪತಿ ಮತ್ತು ಯೋಗಿಕ್‌ ಸೈನ್ಸಸ್‌(BNYS) ಪದವಿ ಪಡೆದುಕೊಂಡಿದ್ದಾರೆ.

ಡಾ. ರಂಜಿತಾ ಅವರು ಬೆಂಗಳೂರಿನ ಉನ್ನತಿ ಹೀಲಿಂಗ್ ಫೌಂಡೇಶನ್‌ನಿಂದ ಬೇಸಿಕ್ ಪ್ರಾಣಿಕ್ ಹೀಲಿಂಗ್ ಕೋರ್ಸನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಆ ಮೂಲಕ ಅವರ ವೃತ್ತಿ ಅನುಭವ ಮತ್ತು ಚಿಕಿತ್ಸಾ ಪರಿಣಿತಿ ಇನ್ನಷ್ಟು ಸಮೃದ್ಧವಾಗಿದೆ. ಡಾ. ರಂಜಿತಾ ಅವರ ಯೋಗಾಭ್ಯಾಸ, ಪ್ರಕೃತಿ ಚಿಕಿತ್ಸೆ ಮತ್ತು ಎನೆರ್ಜಿ ಹೀಲಿಂಗ್‌ ದಂಪತಿಗಳ ಒಟ್ಟಾರೆ ದೈಹಿಕ ಮತ್ತು ಭಾವನಾತ್ಮಕ ಸ್ವಾಸ್ಥ್ಯಕ್ಕೆ ಒತ್ತು ನೀಡುತ್ತದೆ.

ಡಾ. ರಂಜಿತಾ ಅವರು ಮಣಿಪಾಲದ ಪರೀಕಾ, ಎಸ್‌ಡಿಎಂ ನೇಚರ್ ಕ್ಯೂರ್ ಆಸ್ಪತ್ರೆ, ಬೆಂಗಳೂರಿನ ಕ್ಷೇಮವನ ಮತ್ತು ಶಾಂತಿವನದ ಎಸ್‌ಡಿಎಂ ನೇಚರ್‌ ಕ್ಯೂರ್‌ ಆಸ್ಪತ್ರೆಯಂಥ ಗೌರವಾನ್ವಿತ ಸಂಸ್ಥೆಗಳಲ್ಲಿ, ಜೂನಿಯರ್ ಡಾಕ್ಟರ್ ಮತ್ತು ಇಂಟರ್ನ್‌ಶಿಪ್‌ ಮಾಡಿದ್ದಾರೆ. ಈ ಅದ್ಭುತ ಅನುಭವದ ಮೂಲಕ ಅವರು ಪ್ರಕೃತಿಚಿಕಿತ್ಸೆಯ ಚಿಕಿತ್ಸೆಗಳು ಮತ್ತು ಯೋಗ ಚಿಕಿತ್ಸೆಯನ್ನ ಸಮರ್ಪಕವಾಗಿ ಅರಿಯಲು ಸಾಧ್ಯವಾಗಿದೆ. ಇದರಿಂದ ಪ್ರತಿ ದಂಪತಿಯ ಆರೋಗ್ಯದ ಅಗತ್ಯಗಳನ್ನು ಅರಿಯಲು ಅವರಿಗೆ ಸಾಧ್ಯವಾಗಿದೆ.

ದಂಪತಿಗಳ ಆರೋಗ್ಯ ಮತ್ತು ನೆಮ್ಮದಿಯನ್ನು ಹೆಚ್ಚಿಸಲು ಡಾ. ರಂಜಿತಾ ಅವರು ತಮ್ಮನ್ನು ತಾವು ಪ್ರತಿ ಕೆಲಸದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ದಂಪತಿಗಳಿಗೆ ಮಾರ್ಗದರ್ಶನ ಮಾಡುತ್ತಿರಲಿ, ಕ್ಲಿನಿಕಲ್‌ ಸೆಟ್ಟಿಂಗ್ಸ್‌ನಲ್ಲಿ ತಮ್ಮ ಅನುಭವ ನೀಡುತ್ತಿರಲಿ, ಕಲಿಕೆಯ ಮೂಲಕ ಕೌಶಲ್ಯ ಹೆಚ್ಚಿಸಿಕೊಳ್ಳುವುದಾಗಿರಲಿ ಎಲ್ಲದರಲ್ಲೂ ಅವರು ತಮ್ಮ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ತತ್ವಗಳನ್ನು ಅನುಸರಿಸುತ್ತಾರೆ. ಹಾಗಾಗಿ ಅವರು ದಂಪತಿಗಳಿಗೆ ಅತ್ಯಂತ ಮೆಚ್ಚಿನವರಾಗಿದ್ದಾರೆ ಹಾಗೂ ಅದೆಷ್ಟೋ ಜನರಿಗೆ ಡಾ. ರಂಜಿತಾ ಅವರು ಆರೋಗ್ಯ ಮತ್ತು ಉತ್ತಮ ಜೀವನ ಶೈಲಿ ಅಳವಡಿಸಿಕೊಂಡು ನೆಮ್ಮದಿಯಾಗಿರಲು ಪ್ರೇರಣೆಯಾಗಿದ್ದಾರೆ.

ಈ ಪುಟವನ್ನು ಹಂಚಿಕೊಳ್ಳಿ